ಕೋರ್ಟ್ ಆವರಣದಲ್ಲಿರುವ ಜಾಮೀನು ಕೊಡಲು ಬಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಕುರಿತಂತೆ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗದ್ದಿಗೆ ಬಳಿಯ ಮರಯ್ಯನಹುಂಡಿ ನಿವಾಸಿ ಕೆಂಡಗಣ್ಣಪ್ಪ ಹಲ್ಲೆಗೆ ಒಳಗಾದವರು. ವಕೀಲರಾದ ರವಿ, ಸುರೇಶ್ ಹಾಗೂ ಇವರ ತಂದೆ ಶಿವಣ್ಣ ಹಾಗೂ ಸಹೋದರ ಕೆಂಡಗಣ್ಣ ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.