ಕಲಬುರಗಿಯ ಹೀರಾಪುರ ಬಡಾವಣೆಯಲ್ಲಿ ಮಚ್ಚಿನಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆಯಾಗಿದೆ. ಕಲಬುರಗಿ ತಾಲೂಕಿನ ಮೈನಾಳ ಗ್ರಾಮದ ಮರೆಪ್ಪ ಕಟ್ಟಿಮನಿ ಎಂಬ 24 ವಯಸ್ಸಿನ ಯುವಕ ಕೊಲೆ ಆಗಿದ್ದಾನೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್ ಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಮೃತನ ಸಹೋದರಿ ಸುನೀತಾ ಟೆಂಗಳಿಯವರು ಆತಂಕ ವ್ಯಕ್ತ ಪಡಿಸಿದ್ದಾರೆ. ಸಹೋದರ ಮರೆಪ್ಪ ಹಾಗೂ ಅಕ್ಕನ ಮಗ ಉಮೇಶ ಕೂಡಿ ಕಲಬುರಗಿಯಲ್ಲಿ ಇರ್ತಾಯಿದ್ದರು. ಆದ್ರೆ ಮರೆಪ್ಪನ ಕೊಲೆಯ ನಂತರ ತಮ್ಮ ಅಕ್ಕನ ಮಗ ಉಮೇಶ ನಾಪತ್ತೆಯಾಗಿದ್ದಾನೆ. ಮೊಬೈಲ್ ಸಂಪರ್ಕಕ್ಕೂ ಸಿಗ್ತಿಲ್ಲ, ದುಷ್ಕರ್ಮಿಗಳು ಈತನಿಗೂ ಏನೋ ಮಾಡಿದ್ದಾರೆ ಅನ್ನೋ ಸಂಶಯ ಇದೆ. ಪೊಲೀಸರು ತಪ್ಪಿತಸ್ತರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು