ಚಿಕ್ಕಮಗಳೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾಕ್ಷಿಯಾಗಿದೆ. ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಶುಕ್ರವಾರ 12 ಮಧ್ಯಾಹ್ನ ಗಂಟೆ ಸುಮಾರಿಗೆ ಈದ್ ಮಿಲಾದ್ ಮೆರವಣಿಗೆಯಲ್ಲಿ ಸಾಗುವ ಹೊತ್ತಿನಲ್ಲಿ ಹಲವು ಹಿಂದೂ ಕುಟುಂಬಗಳು ಮುಸ್ಲಿಂ ಫಕೀರರ ಬಳಿ ಆಶೀರ್ವಾದ ಪಡೆಯುವ ಜೊತೆಗೆ ಪೂಜೆ ಸಲ್ಲಿಸಿದ್ದಾರೆ.. ಇದರ ಜೊತೆಗೆ ಸಖರಾಯಪಟ್ಟಣದಲ್ಲಿ ಕಳೆದ ಗುರುವಾರ ರಾತ್ರಿ ನಡೆದ ಗಣಪತಿ ವಿಸರ್ಜನಾ ಮೆರವಣಿಗೆಯ ವೇಳೆ ಪಟ್ಟಣದ ಮುಸ್ಲಿಮರು ಗಣೇಶನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಹಿಂದೂ ಸಹೋದರರಿಗೆ ತಂಪು ಪಾನೀಯ, ನೀರು, ಹಣ್ಣು ಅಂಚಿ ಭಾವೈಕ್ಯತೆ ಮೆರೆದಿದ್ದಾರೆ.. ಇದು ಈ ವರ್ಷ ಜಿಲ್ಲೆಯಲ್ಲಿ ಕಂಡ ಅದ್ಬುತ ಭಾವೈಕ್ಯತೆ ಎಂದು ಪೊಲೀಸ್ ಇಲಾಖೆಯೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ..