ಕಲೆಗಾರನಿಗೆ ಪ್ರಮುಖವಾಗಿ ಐತಿಹಾಸಿಕ ಪ್ರಜ್ಞೆ ಇರಬೇಕು. ಕಲಾಕೃತಿಗಳನ್ನು ಸೃಷ್ಟಿಸುವಾಗ ನಮಗಿಂತ ಮೊದಲು ಸೃಷ್ಟಿಯಾದ ಕಲಾಕೃತಿಗಳನ್ನು ಪರಿಶೀಲನೆ ಮಾಡುವ ಸೂಕ್ಷ ಅವಲೋಕನದ ಅಗತ್ಯ ತುಂಬಾ ಮುಖ್ಯವಾದದ್ದು ಎಂದು ಹಿರಿಯ ದೃಶ್ಯ ಕಲಾ ವಿಮರ್ಶಕರಾದ ಕೆ.ವಿ.ಸುಬ್ರಮಣ್ಯಂ ಅವರು ಹೇಳಿದರು. ಮೈಸೂರು ದಸರಾ ಮಹೋತ್ಸವ-2025 ದಸರಾ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿ ಕರ್ನಾಟಕ ಶಿಲ್ಪ ಕಲಾ ಅಕಾಡೆಮಿ, ಬೆಂಗಳೂರು ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು(ಕಾವಾ) ಮೈಸೂರು ಇವರ ಸಹಯೋಗದಲ್ಲಿ “ಟೆರಾಕೋಟಾ ಭಿತ್ತಿ ಶಿಲ್ಪಕಲಾ ಶಿಬಿರ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.