ಸಾಗರ ತಾಲೂಕಿನ ಆನಂದಪುರ ಸಮೀಪದ ಹೊಸಗುಂದ - ಅಡೂರು ಸಂಪರ್ಕ ಸೇತುವೆ ಧಾರಾಕಾರ ಮಳೆಗೆ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಕುಸಿದಿದೆ. ಸೇತುವೆ ಮದ್ಯಭಾಗದಲ್ಲಿ ಕುಸಿತ ಕಂಡಿದ್ದು ಸವಾರ ಆತಂಕದಲ್ಲಿ ಓಡಾಡುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹೊಲಗದ್ದೆಗಳಲ್ಲಿ ನೀರು ತುಂಬಿ ರೈತರಿಗೆ ಭಾರಿ ನಷ್ಟ ಸಂಭವಿಸಿದೆ. ಮಳೆ ನೀರು ನುಗ್ಗಿ ರಸ್ತೆಗಳು, ಬತ್ತದ ಗದ್ದೆ, ಮೆಕ್ಕೆ ಜೋಳ, ಶುಂಠಿ ಬೆಳೆ, ಅಡಿಕೆ ತೊಟಗಳಿಗೆ ಹಾನಿಯಾಗಿದೆ. ಸ್ಥಳೀಯರಾದ ಸೋಮಶೇಖರ ಲಾವಿಗ್ಗೆರೆ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ತೊಂದರೆಗೊಳಗಾದ ರೈತರಿಗೆ ನೆರವು ನೀಡಿ ತುರ್ತಾಗಿ ಕೈಗೊಳ್ಳ ಬೇಕಾದ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.