ಹುಬ್ಬಳ್ಳಿಯ ನೂತನ ನ್ಯಾಯಾಲಯದಲ್ಲಿ ಇರಿಸಲಾದ ಗಣಪತಿಯ ದರ್ಶನ ಪಡೆದು ಸಂಸದ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಪೂಜೆ ಸಲ್ಲಿಸಿ, ನಾಡಿನ ಸಮಸ್ತ ಜನತೆಯ ಒಳಿತಿಗಾಗಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಮಲ್ಲಿಕಾರ್ಜುನ ಸಾವಕಾರ, ಮಹೇಶ ಬುರ್ಲಿ, ರಾಯನಗೌಡ್ರ, ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷರಾದ ಎಂ. ಎಸ್ ಬಾಣದ, ಉಪಾಧ್ಯಕ್ಷರಾದ ಎ.ಕೆ ಅಕ್ಕಿ, ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎಸ್ ಶಿಗ್ಗಾಂವಿ, ಜಂಟಿ ಕಾರ್ಯದರ್ಶಿಗಳಾದ ಜಿ.ಡಿ ಜಂತ್ಲಿ, ಮಹೇಶ ಹಿರೇಮಠ ಉಪಸ್ಥಿತರಿದ್ದರು.