ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ನ.ರಾ ಮೊಹಲ್ಲಾ ವಿಭಾಗದ ವ್ಯಾಪ್ತಿಯ ಕೇಂದ್ರ, ಚಾಮುಂಡಿಪುರo, ರಎನ್ ಆರ್ ಮೊಹಲ್ಲಾ, ಜ್ಯೋತಿನಗರ ಹಾಗೂ ವರುಣ ಉಪವಿಭಾಗ ಕಛೇರಿಗಳಲ್ಲಿ ಸೆಪ್ಟೆಂಬರ್ 15, 16 ಮತ್ತು 17 ರಂದು ಜನಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ. ಸೆಪ್ಟೆಂಬರ್ 15 ರಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಹಾಗೂ ಮಧ್ಯಾಹ್ನ 3 ಗಂಟೆಗೆ ನ.ರಾ ಮೊಹಲ್ಲಾ ಉಪವಿಭಾಗ ಕಚೇರಿಯಲ್ಲಿ, ಸೆಪ್ಟೆಂಬರ್ 16 ರಂದು ಬೆಳಗ್ಗೆ 11 ಗಂಟೆಗೆ ಚಾಮುಂಡಿಪುರo ಹಾಗೂ ಮಧ್ಯಾಹ್ನ 3 ಗಂಟೆಗೆ ಜ್ಯೋತಿನಗರ ಉಪವಿಭಾಗ ಕಚೇರಿಯಲ್ಲಿ, ಸೆಪ್ಟೆಂಬರ್ 17 ರಂದು ಬೆಳಗ್ಗೆ 11 ಗಂಟೆಗೆ ವರುಣ ಉಪವಿಭಾಗ ಕಚೇರಿಯಲ್ಲಿ ಆಯೋಜಿಸಲಾಗಿದೆ.