ಸಕಲೇಶಪುರ: ಶಿರಾಡಿ ಘಾಟ್ ರಸ್ತೆಯಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು, ಜನರ ನಿರ್ಲಕ್ಷ್ಯ ವರ್ತನೆ ಆತಂಕ ಮೂಡಿಸಿದೆ. ಈ ಕಾಡಾನೆ ರಸ್ತೆ ಬದಿಯಲ್ಲಿ ಸಂಚರಿಸುತ್ತಿರುವಾಗ, ಕೆಲವರು ಅದನ್ನು ಹತ್ತಿರದಿಂದ ನೋಡಲು ಮುಂದಾಗಿರುವುದು ಸುರಕ್ಷತಾ ದೃಷ್ಟಿಯಿಂದ ಚಿಂತಾಜನಕವಾಗಿದೆ.ಅರಣ್ಯ ಇಲಾಖೆ ಅಧಿಕಾರಿಗಳು ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದು, ಘಾಟ್ ರಸ್ತೆಯಲ್ಲಿ ನಿಧಾನವಾಗಿ ಮತ್ತು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಿದ್ದಾರೆ. ವಾಹನ ಸವಾರರು ಅನವಶ್ಯಕವಾಗಿ ಕೆಳಗಡೆ ಇಳಿದು ಕಾಡಾನೆಗೆ ಹಾನಿ ಮಾಡುವಂತ ಶಬ್ದ ಅಥವಾ ಚಟುವಟಿಕೆ ಮಾಡದೇ, ಶಾಂತವಾಗಿರಬೇಕು ಎಂದು ಮನವಿ ಮಾಡಿದ್ದಾರೆ.