ಭಾರತೀಯ ಓರಲ್ ಮತ್ತು ಮ್ಯಾಕ್ಸಿಲೋ ಫೇಷಿಯಲ್ ಸರ್ಜನ್‌ಗಳ ಸಂಘ (AOMSI) ಹಾಗೂ ಎಸ್‌ಎನ್‌ಐ ಡಿಎಸ್‌ಆರ್ ಆಶ್ರಯದಲ್ಲಿ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ 12ನೇ AO MSI ಕರ್ನಾಟಕ ರಾಜ್ಯ ಶಿಬಿರವನ್ನು ಸೆಪ್ಟೆಂಬರ್ 12ರಿಂದ 14ರ ವರೆಗೆ ಕಲಬುರಗಿಯ ಸೇಡಂ ರಸ್ತೆಯ MRMC ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಶಶಿಲ್ ನಮೋಶಿ ತಿಳಿಸಿದ್ದಾರೆ. ಗುರುವಾರ ನಾಲ್ಕು ಗಂಟೆಗೆ ಮಾತನಾಡಿದ ಅವರು, ರಾಜ್ಯದ ಅನೇಕ ಮುಖ್ಯ ಶಸ್ತ್ರತಜ್ಞರು, ಅಧ್ಯಾಪಕರು ಹಾಗೂ ವೈದ್ಯಕೀಯ ವಿಭಾಗದ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು...