ಸ್ವ-ಸಹಾಯ ಸಂಘಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಗುರುವಾರ ಸಂಜೆ 5 ಗಂಟೆಗೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಮಂಡಳಿಯ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಒತ್ತಾಯಿಸಿದರು. ರಾಜ್ಯ ಸರ್ಕಾರವು ಮಹಿಳೆಯರ ಅಭಿವೃದ್ಧಿಗಾಗಿ ಆರಂಭಿಸಿದ ಸ್ವ-ಸಹಾಯ ಸಂಘ ಮತ್ತು ಮೈಕ್ರೋ ಫೈನಾನ್ಸ್‌ಗಳಿಂದ ಇಂದು ಅನೇಕ ಕುಟುಂಬಗಳಲ್ಲಿ ಸಾಮರಸ್ಯ ಕದಡುವಂತಹ ಹಂತಕ್ಕೆ ಬಂದಿರುವುದು ವಿಷಾದನೀಯ. ಸಂಸಾರದ ಯಜಮಾನ ತನ್ನ ಪತ್ನಿಯನ್ನು ಮುಂದಿಟ್ಟುಕೊಂಡು ಸ್ವ-ಸಹಾಯ ಸಂಘದಿಂದ ಸಾಲವನ್ನು ಪಡೆದು, ಆನಂತರ ಒಂದೆರೆಡು ತಿಂಗಳು ಕಾಲ ಸಾಲ ಮರುಪಾವತಿಸಿ, ನಂತರ ಸಂಘಕ್ಕೆ ಹಣ ಪಾವತಿಸದೇ ಪ್ರತಿನಿತ್ಯ ಮನೆಯಲ್ಲಿ ಜಗಳ ಮಾಡಿಕೊಳ್ಳುತ್ತಿರುವುದರಿಂದ ಅನೇಕ ಸಂಸಾರಗಳು ಇಂದು ಬೀದಿಗೆ ಬರುತ್ತಿವೆ ಎಂದರು