ಸಪ್ಟಂಬರ್ 5 ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಲವರ್ ಜೊತೆ ಓಡಿ ಹೋಗಿರುವಂತಹ ಲೀಲಾವತಿ ವಿಚಾರವಾಗಿ ಆಕೆಯ ಗಂಡ ಮಂಜುನಾಥ್ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಬನ್ನೇರ್ಘಟ್ಟ ವ್ಯಾಪ್ತಿಯಲ್ಲಿ ನಡೆದಿರುವಂತಹ ಘಟನೆ ಇದಾಗಿದ್ದು ಲೀಲಾವತಿ ನೆನೆದು ಗಂಡ ಮಕ್ಕಳು ಕಣ್ಣೀರು ಹಾಕಿದ್ದಾರೆ. ಆಕೆ ಧರಿಸಿದ್ದ ಸೀರೆಯನ್ನು ಹಿಡಿದು ಗಂಡ ಮಂಜುನಾಥ್ ಕೈಮುಗಿದು ಆಕೆಯ ಸೈಟಿನ ಆಸೆಗೆ ಲವರ್ ಸಂತೋಷ ಆಕೆಯನ್ನ ಎಸ್ಕೇಪ್ ಮಾಡಿಕೊಂಡು ಹೋಗಿದ್ದಾನೆ ಅಂತ ಆರೋಪ ಮಾಡಿದ್ದಾನೆ. ವಿಡಿಯೋ ಸಂದರ್ಭದಲ್ಲಿ ಮಕ್ಕಳ ಅಳುವ ಧ್ವನಿಯು ಕೂಡ ಕೇಳಿಸುತ್ತಿದ್ದು ಎಂಥವರಿಗೂ ಕೂಡ ಕಣ್ಣೀರು ಬರಿಸುವ ಹಾಗಿದೆ.