ಹುಬ್ಬಳ್ಳಿ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಕ್ಷುಲ್ಲಕ ವಿಷಯವಾಗಿ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ಶಹರ ಠಾಣೆ ಪೊಲೀಸರು ಅಪ್ರಾಪ್ತ ಸೇರಿ ಐವರನ್ನು ಬಂಧಿಸಿದ್ದಾರೆ. ಬಿಡನಾಳ ಮಾರುತಿ ನಗರದ ಪ್ರತಾಪ ಉರ್ಫ್ ಚೇತನಗೌಡರ (32)ಗೆ ಶನಿವಾರ ರಾತ್ರಿ ಚಾಕುವಿನಿಂದ ಇರಿಯಲಾಗಿತ್ತು. ಈ ಪ್ರಕರಣದ ಬೆನ್ನು ಬಿದ್ದಿರುವ ಪೊಲೀಸ್ ಇನ್‌ಸ್ಪೆಕ್ಟರ್ ಮಹ್ಮದ್ ರಫೀಕ್ ತಹಸೀಲ್ದಾರ್ ನೇತೃತ್ವದ ತಂಡ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಗಣೇಶ ಮೆರವಣಿಗೆ ವೇಳೆ ನೂಕಾಟ ನಡೆಸಿದ್ದಕ್ಕೆ ಚೇತನ, ಪಕ್ಕ ಇದ್ದವರಿಗೆ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ಶ್ರೀ, ಶಿವಕುಮಾರ, ರಾಕೇಶ, ಫಕೀರೇಶ ಹಾಗೂ ಅಪ್ರಾಪ್ತರು ಸೇರಿ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ.