Download Now Banner

This browser does not support the video element.

ಬೆಂಗಳೂರು ಉತ್ತರ: ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಡಾ ಎಂ.ಎ.ಸಲೀಂ ನೇಮಕಾತಿ ಮುಂದುವರಿಕೆ

Bengaluru North, Bengaluru Urban | Aug 30, 2025
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮಹಾ ನಿರ್ದೇಶಕರಾಗಿ ಡಾ ಎಂ.ಎ ಸಲೀಂ ಅವರನ್ನ ಖಾಯಂಗೊಳಿಸಲಾಗಿದೆ.ಅಲೋಕ್ ಮೋಹನ್ ಅವರಿಂದ ತೆರವಾದ ಸ್ಥಾನಕ್ಕೆ ಸಲೀಂ ಅವರನ್ನ ಹಂಗಾಮಿ ಡಿಜಿ & ಐಜಿಪಿಯಾಗಿ ರಾಜ್ಯ ಸರ್ಕಾರ ನೇಮಕಗೊಳಿಸಿತ್ತು. ಆಗಸ್ಟ್ 30ರಂದು ಸಂಜೆ 4 ಗಂಟೆ ವೇಳೆಗೆ ಹೊಸ ಆದೇಶ ಪ್ರಕಟಿಸಿರುವ ಸರ್ಕಾರ ಸಲೀಂ ಅವರನ್ನ ಪೂರ್ಣಾವಧಿಗೆ ರಾಜ್ಯ ಪೊಲೀಸ್ ಮಹಾ‌ನಿರ್ದೇಶಕರನ್ನಾಗಿ ನೇಮಿಸಿದೆ. ಆದೇಶ ಪ್ರಕಟವಾದ ಬೆನ್ನಲ್ಲೇ ಗೃಹ ಸಚಿವ ಡಾ ಜಿ.ಪರಮೇಶ್ವರ್ ಅವರ ಸದಾಶಿವನಗರದ ನಿವಾಸದಲ್ಲಿ ಸಲೀಂ ಅವರು ಭೇಟಿಯಾಗಿದ್ದಾರೆ.
Read More News
T & CPrivacy PolicyContact Us