ಹಾವೇರಿ ಜಿಲ್ಲೆ ಶಿಗ್ಗಾಂವ್ ಪಟ್ಟಣದ ಹೊರವಲಯದಲ್ಲಿ ಎರಡು ಬೈಕಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಐವರಿಗೆ ಗಂಭೀರಗಾಯಗಳಾಗಿವೆ. ಗಾಯಾಳುಗಳನ್ನ ೨೮ ವರ್ಷದ ಆಕಾಶ್,೩೦ ವರ್ಷದ ಚಿದಾನಂದ್, ೩೩ ವರ್ಷದ ಪ್ರಶಾಂತ್, ೨೬ ವರ್ಷದ ಸುರೇಶ್ ಮತ್ತು ೩೬ ವರ್ಷದ ಶಿವರಾಜ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.