ಹುಬ್ಬಳ್ಳಿ: ನಗರದ ಹಳೇ ಹುಬ್ಬಳ್ಳಿಯ ಆರ್ ಎನ್ ಶೆಟ್ಟಿ ರೋಡ್ ಲಕ್ಷ್ಮೀಪುರ ಬ್ಯಾಂಕರ್ಸ್ ಕಾಲೋನಿ ಅಭಿವೃದ್ಧಿ ಸಂಘ ಆಯೋಜಿಸಿದ ಗಜಾನನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಈ ವೇಳೆ ಮೊದಕ ಪ್ರಿಯನಿಗೆ ಪೂಜೆಯನ್ನು ಸಲ್ಲಿಸಿದರು. ಈ ವೇಳೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು, ನನ್ನ ಆರೋಗ್ಯವನ್ನು ಈ ವೇಳೆ ತಪಾಸಣೆ ಮಾಡಿಸಿಕೊಂಡೆನು ಎಂದು ತಿಳಿಸಿದರು.. ಈ ಸಂದರ್ಭದಲ್ಲಿ ಲಕ್ಷ್ಮೀಪುರ ಬ್ಯಾಂಕರ್ಸ್ ಕಾಲೋನಿ ಅಭಿವೃದ್ಧಿ ಸಂಘದ ಪದಾಧಿಕಾರಿಗಳು, ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.