ಬಿ ಆರ್ ಟಿ ಎಸ್ ಚಿಗರಿ ಬಸ್ ನಿಂತಿದ್ದ ಬುಲೆರೋ ವಾಹನಕ್ಕೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಹುಬ್ಬಳ್ಳಿಯ ನವನಗರ ಬಳಿ ಗುರುವಾರ ಸಂಜೆ ಸಿಗ್ನಲ್ ಸಂಭಂದಿಸಿದಂತೆ ಕೆಲಸ ಮಾಡುತ್ತಿದ್ದ ವಾಹನಕ್ಕೆ ಚಿಗರಿ ಬಸ್ ಡಿಕ್ಕಿ ಹೊಡೆದಿದ್ದು. ಬಸ್ ಮುಂಭಾಗ ಜಖಂಗೊಂಡಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ಚಿಗರಿ ಬಸ್ ಅಪಘಾತದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚು ಆಗಿದ್ದು. ಈ ಬಗ್ಗೆ ಬಿ ಆರ್ ಟಿ ಎಸ್ ಅಧಿಕಾರಿಗಳು ಚಾಲಕರಿಗೆ ಸೂಕ್ತ ನಿರ್ದೇಶನದ ಜೊತೆಗೆ ತಾಂತ್ರಿಕ ಸಮಸ್ಯೆಗಳಿಂದ ಆಗುವ ಅಪಘಾತಕ್ಕೆ ಬ್ರೇಕ್ ಹಾಕುವ ಕಾರ್ಯವನ್ನು ಮಾಡಬೇಕಿದೆ.