ನಾಡಹಬ್ಬ ದಸರಾ ಮಹೋತ್ಸವಕ್ಕಾಗಿ ನಗರೆದೆಲ್ಲೆಡೆ ವಿದ್ಯುತ್ ದೀಪಾಲಂಕಾರಕ್ಕೆ ಸಿದ್ಧತೆ ಮಾಡಿದ್ದು, ರಸ್ತೆ ಇಕ್ಕೆಲಗಳಲ್ಲಿ ಅಳವಡಿಡುತ್ತಿರುವ ಕಬ್ಬಿಣದ ಪೋಲ್ ಗಳಿಗೆ ಸಾರ್ವಜನಿಕರ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜನಸಂದಣಿ ಇರುವ ಮೈಸೂರಿನ ವಿಶ್ವವಿದ್ಯಾಲಯ ರಸ್ತೆ ಹಾಗೂ ಪಕ್ಕದ ಕುಕ್ಕರಹಳ್ಳಿ ಕೆರೆಗೆ ಹೋಗುವ ರಸ್ತೆಯಲ್ಲಿ ಫುಟ್ ಪಾತ್ ನಲ್ಲಿ ರಸ್ತೆಯ ಒಳಭಾಗಕ್ಕೆ ಪೋಲ್ ಅಳವಡಿಸುತ್ತಿದ್ದು ಹಲವು ದ್ವಿಚಕ್ರ ವಾಹನ ಸವಾರರು ಇದಕ್ಕೆ ಡಿಕ್ಕಿಯಾಗಿ ಕೆಳಕ್ಕೆ ಬೀಳುತ್ತಿದ್ದಾರೆಂದು ಜೆಡಿಎಸ್ ಯುವ ಮುಖಂಡ ಪ್ರಶಾಂತ್ ಆರೋಪಿಸಿದ್ದಾರೆ.