ರಾಮನಗರ -- ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜೆಎಸ್ಟಿ ಇಳಿಗೆ ಮಾಡಿರುವುದರಿಂದ ದೇಶವಾಸಿಗಳಿಗೆ ಭಾರೀ ಉಳಿತಾಯವಾಗಿದೆ ಎಂದು ಮಂಗಳವಾರ ನಗರದ ಜಿಲ್ಲಾ ನ್ಯಾಯಾಲಯದ ಅವರಣದಲ್ಲಿ ಕೇಕ್ ಕಟ್ ಮಾಡುವ ಮೂಲಕ ವಕೀಲರು ಸಂಭ್ರಮಿಸಿದರು. ದಶಕಗಳಿಂದ ನಮ್ಮ ದೇಶದ ಜನರು ಮತ್ತು ವ್ಯಾಪಾರಿಗಳು ವಿವಿಧ ತೆರಿಗೆಗಳ ಜಾಲದಲ್ಲಿ ಸಿಲುಕಿಕೊಂಡಿದ್ದರು. ಆಕ್ಟ್ರಾಯ್, ಪ್ರವೇಶ ತೆರಿಗೆ, ಮಾರಾಟ ತೆರಿಗೆ, ಅಬಕಾರಿ, ವ್ಯಾಟ್, ಸೇವಾ ತೆರಿಗೆ ಸೇರಿದಂತೆ ಡಜನ್‌ಗಟ್ಟಲೆ ತೆರಿಗೆಗಳು ಅಸ್ತಿತ್ವದಲ್ಲಿದ್ದವು. ಒಂದು ನಗರದಿಂದ ಮತ್ತೊಂದು ನಗರಕ್ಕೆ ಸರಕುಗಳನ್ನು ಕಳುಹಿಸಲು, ನಾವು ಲೆಕ್ಕವಿಲ್ಲ