ಧರ್ಮಸ್ಥಳ ಮತ್ತು ಅನನ್ಯಾ ಭಟ್ ಬಗ್ಗೆ ಹೇಳಿಕೆ ನೀಡಿ ಸುದ್ದಿಯಾಗಿರುವ ಸುಜಾತ ಭಟ್ ಅವರ ಬೆಂಗಳೂರಿನ ಬನಶಂಕರಿ ನಿವಾಸದ ಬಳಿ ಎಸ್.ಐ.ಟಿ ತನಿಖಾ ತಂಡ ಆಗಮಿಸೋ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಸುಜಾತ ಭಟ್ ನಿವಾಸಕ್ಕೆ ಮತ್ತಷ್ಟು ಭದ್ರತೆ ಹೆಚ್ಚಳ ಮಾಡಿದ್ದು, ಬಂದೋಬಸ್ತ್ ನಿಯೋಜಿಸಲಾಗಿದೆ. ಬನಶಂಕರಿ ಇನ್ಸ್ಪೆಕ್ಟರ್ ಕೊಟ್ರೇಶ್ ನೇತೃತ್ವದಲ್ಲಿ ಮಹಿಳಾ ಪೇದೆಗಳು ಸೇರಿ ಹತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸ್ಥಳೀಯ ಪೊಲೀಸ್ ಸಿಬ್ಬಂದಿ ಜೊತೆ ಸಿಎಆರ್ ತುಕಡಿ ಕೂಡ ಇದೆ.