ತಾಲ್ಲೂಕಿನ ವಲಸೆ ಗ್ರಾಮದಲ್ಲಿ ಚರಂಡಿಗಳ ಸ್ವಚ್ಚತೆ ಮಾಡಿಸುವಂತೆ ಶುಕ್ರವಾರ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ. ಚರಂಡಿಗಳು ಸ್ವಚ್ಚತೆಯಿಲ್ಲದೆ ಕಲುಷಿತ ನೀರು ರಸ್ತೆಗಳ ಮೇಲೆ ಹರಿಯುತ್ತದೆ. ಕುಡಿಯುವ ನೀರಿನ ಮಿನಿಟ್ಯಾಂಕ್ ನ ಮೇಲ್ಭಾಗದಲ್ಲಿ ಮುಚ್ಚಳವಿಲ್ಲದೆ ನೀರು ಕಲುಷಿತಗೊಳುತ್ತಿದೆ. ಈ ಕುರಿತು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಗಮನ ಸೆಳೆದರು, ಯಾವುದೇ ಪ್ರಯೋಜನವಾಗಿಲ್ಲ, ಮಿನಿಟ್ಯಾಂಕ್ ಭರ್ತಿಯಾದಾಗ ನೀರು ರಸ್ತೆ ಮೇಲೆ ಹರಿಯುತ್ತಿದೆ. ಕೂಡಲೇ ಚರಂಡಿಗಳು ಸ್ವಚ್ಚತೆ ಮಾಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.