ಗಣಪತಿ ಹಬ್ಬಕ್ಕೆ ತವರಿಗೆ ಬಂದಿದ್ದ ಗೃಹಿಣಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಗರ ತಾಲೂಕು ಆನಂದಪುರ ಸಮೀಪದ ಯಡೇಹಳ್ಳಿಯಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದ್ದು ಬುಧವಾರ ಬೆಳಿಗ್ಗೆ 7 ಗಂಟೆಗೆ ಪ್ರಕರಣ ಬೆಳಕಿಗೆ ಬಂದಿದೆ. ರಂಜಿತಾ (28) ನೇಣಿಗೆ ಶರಣಾದವರು 9 ವರ್ಷದ ಹಿಂದೆ ಆನಂದಪುರದ ಮುರುಘಾಮಠ ನಿವಾಸಿಯೊಬ್ಬರ ಜೊತೆಗೆ ರಂಜಿತಾಗೆ ಮದುವೆಯಾಗಿತ್ತು. ವಿಚ್ಛೇದನ ಪಡೆದು ನಾಲ್ಕು ತಿಂಗಳ ಹಿಂದೆ ಸಾಗರದ ನಿವಾಸಿ ಶಶಿಕುಮಾರ್ ಎಂಬುವವರೊಂದಿಗೆ ಮದುವೆ ಆಗಿದ್ದರು. ಈಚೆಗೆ ಮಗು ಕೂಡ ಮೃತಪಟ್ಟಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಮನನೊಂದು ನೇಣಿಗೆ ಶರಣಾಗಿರಬಹುದು ಎಂಬ ಶಂಕೆ ಇದೆ. ಘಟನೆ ಸಂಬಂಧ ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.