*ಹಾಸನದಲ್ಲಿ ರೈತರ ಬೃಹತ್ ಪ್ರತಿಭಟನೆ* ಹಾಸನ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸಾಮೂಹಿಕ ನಾಯಕತ್ವದ ಹಾಸನ ಜಿಲ್ಲಾ ಘಟಕದ ನೇತೃತ್ವದಲ್ಲಿ ಇಂದು ಬೆಳಗ್ಗೆ 1ಗಂಟೆಗೆ ಹಾಸನದ ಕೆ.ಆರ್.ಪುರಂ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಮಾಡಿದರು.ಆಲೂರು ತಾಲ್ಲೂಕು, ಕೆ.ಹೊಸಕೋಟೆ ಹೋಬಳಿ, ಚನ್ನಾಪುರ ಗ್ರಾಮದ ಬ್ರಾಂಚಿನಲ್ಲಿ 2007ರಲ್ಲಿ ಸಾಲ ಪಡೆದಿದ್ದ ಕುಂದೂರು ಗ್ರಾಮದ ರಾಜೇಗೌಡರು 2009ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಅವರ ಪತ್ನಿ ಶಾರದಮ್ಮರು ಕ್ಯಾನ್ಸರ್‌ನಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಈ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ರೈತರು ಆಗ್ರಹಿಸಿದರು