ಮುಂಡಗೋಡ:ಮೈನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳಕಿಕಾರೆ ಮತ್ತು ಕುದರೆನಾಳ ಭಾಗದ ಸಾರ್ವಜನಿಕರೊಂದಿಗೆ ಶಾಸಕ ಶಿವರಾಮ್ ಹೆಬ್ಬಾರ್ ಸಭೆ ನಡೆಸಿದರು. ಸಭೆಯ ವೇಳೆ ಕಳಕಿಕಾರೆ ಮತ್ತು ಕುದರೆನಾಳ ಪ್ರದೇಶದ ಸಾರ್ವಜನಿಕರು ಹೊಸ ಬಸ್ ಸಂಚಾರ ಪ್ರಾರಂಭಿಸುವುದು ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಕುರಿತು ಮನವಿ ಸಲ್ಲಿಸಿದರು.