ಬೆಂಗಳೂರು ಉತ್ತರ: ಮನೆ ಮುಂದೆ ನಿಂತಿದ್ದ 4 ವರ್ಷದ ಮಗುವಿನ ಮೇಲೆ ಕಾರು ಹರಿದ ದಾರುಣ ಘಟನೆ
ನೆಲಮಂಗಲದ ವಿವರ್ಸ್ ಬಡಾವಣೆಯಲ್ಲಿ 4 ವರ್ಷದ ಮಗುವಿನ ಮೇಲೆ ಕಾರು ಹರಿದ ದಾರುಣ ಘಟನೆ ಇಂದು ನಡೆದಿದೆ. ಮನೆ ಮುಂದೆ ನಿಂತಿದ್ದ ಮಗುವಿನ ಮೈಮೇಲೆ ಕಾರು ಚಲಿಸಿದರೂ ಮಗು ಬದುಕುಳಿದಿದೆ. ಗಂಭೀರ ಗಾಯಗೊಂಡ ಮಗುವಿಗೆ ಚಿಕಿತ್ಸೆ ನಡೆಯುತ್ತಿದೆ. ಶಶಿ-ಸಿದ್ದಲಿಂಗಯ್ಯ ದಂಪತಿಗಳ ಮಗು ಎಂದು ತಿಳಿದುಬಂದಿದೆ. ಘಟನೆ ಬಳಿಕ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದು, ಎದೆ ಝಲ್ ಎನಿಸೋ ಸಿಸಿಟಿವಿ ದೃಶ್ಯಗಳು ವೈರಲ್ ಆಗಿವೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.