ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಯಳಂದೂರು, ವೈಕೆ.ಮೋಳೆ, ಮಸಣಪುರ ಹಾಗೂ ಹೊಂಗನೂರು ಗ್ರಾಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವಾರದ ಡಾ.ಎಚ್.ಸಿ. ಮಹದೇವಪ್ಪ ಅವರು ಭೇಟಿ ನೀಡಿದ ಹಿನ್ನೆಲೆ ಗ್ರಾಮದ ಮುಖಂಡರು ಹೂವಿನ ಮಳೆ ಸುರಿಸಿ ಬರಮಾಡಿಕೊಂಡರು. ಬಳಿಕ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಬಳಿಕ ಮಾರಮ್ಮನ ದೇವಸ್ಥಾನದಿಂದ ಮಂಗಳವಾದ್ಯದ ಮೂಲಕ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ತಹಶಿಲ್ದಾರ್ ಗಿರಿಜಾ ಹಾಗೂ ಇತರರು ಹಾಜರಿದ್ದರು.