ಕಾರವಾರ: ಜಿಲ್ಲೆಯ ಅರಣ್ಯ ವಾಸಿಗಳ ಸಮಸ್ಯೆಗಳನ್ನು ಬಗೆಹರಿಸುವಂತೆ ನಗರದಲ್ಲಿ ಬೃಹತ್ ಸಮಾವೇಶ
ಜಿಲ್ಲೆಯ ಮೂಲೆ ಮೂಲೆಯಿಂದ ಅರಣ್ಯವಾಸಿಗಳ ಸಮಸ್ಯೆಗಳೊಂದಿಗೆ, ಭೂಮಿ ಹಕ್ಕಿನ ನೀರಿಕ್ಷೆಗಾಗಿ ಚಳಿಗಾಲದ ಅಧಿವೇಶನದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಹಕ್ಕೋತ್ತಾಯಿಸಿ ಬಿಸಿಲಿನಲ್ಲಿಯೂ ಅರಣ್ಯವಾಸಿಗಳ ಬೃಹತ್ ಸಮಾವೇಶ ನಗರದಲ್ಲಿ ಶನಿವಾರ ಸಂಜೆ 5ರವರೆಗೆ ನಡೆಯಿತು. ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ ಅರಣ್ಯವಾಸಿಗಳ ಕಾನೂನು ಜಾಗೃತ ಜಾಥವು ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿದರು.