ರಾಯಚೂರು: ವಾಮ ಮಾರ್ಗದಿಂದ ಕಲ್ಲಿದ್ದಲು ಕಳ್ಳ ಸಾಗಾಣಿಕೆ ಆರೋಪ
ಪ್ರತಿನಿತ್ಯ ಅಕ್ರಮವಾಗಿ ವೈಟಿಪಿಎಸ್ ವಿದ್ಯುತ್ ಘಟಕಕ್ಕೆ ಸಂಬಂಧಿಸಿದ ಕಲ್ಲಿದ್ದಲು ವಾಮಾ ಮಾರ್ಗದಿಂದ ಕಳ್ಳ ಸಾಗಾಣಿಕೆ ಮಾಡುತ್ತಿರುವ ವೈಟಿಪಿಎಸ್ ಇಲಾಖೆಯ ಕೆಲವು ಅಧಿಕಾರಿಗಳು, ಉಪ ಗುತ್ತಿಗೆ ಪಡೆದಿರುವ ಪವರ್ಮ್ಯಾಕ್ ಕಂಪನಿಯ ಕೆಲ ಸಿಬ್ಬಂದಿಗಳು ಹಾಗೂ ಪಡೆದಿರುವ ಗುತ್ತಿಗೆದಾರರು ಸೇರಿಕೊಂಡು ಪ್ರತಿನಿತ್ಯ ನೂರಾರು ಟನ್ ಗಳಷ್ಟು ಕಲ್ಲಿದ್ದಲನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಶಿವಕುಮಾರ್ ಯಾದವ್ ಆರೋಪಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಪ್ರತಿ ತಿಂಗಳು ಕೋಟ್ಯಾಂತರ ರೂಪಾಯಿಗಳ ನಷ್ಟವನ್ನುಂಟುಮಾಡುತ್ತಿರುವ ಇವರುಗಳನ್ನು ಕಾನೂನಿನ ಪ್ರಕಾರ ತಕ್ಷಣವೇ ಬಂಧಿಸಿ ಕ್ರಿಮಿನಲ್ ಮೊಕದ್ದಮೆ ಹೂಡಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.