ರಾಮನಗರ: ಬೈರಮಂಗಲ ಗ್ರಾಮದ ರೈತರ ಧರಣಿಗೆ ಬಿಜೆಪಿ ನಾಯಕರ ಸಾಥ್
ತಮ್ಮ ಭೂಮಿ ಉಳಿವಿಗಾಗಿ ರೈತರು ಬೈರಮಂಗಲ ಗ್ರಾಮದ ರಾಮಮಂದಿರದ ಮುಂದೆ ಧರಣಿ ನಡೆಸುತ್ತಿದ್ದು ಈ ಧರಣಿಗೆ ಬಿಜೆಪಿ ನಾಯಕರು ಸಾಥ್ ನೀಡಿದರು. ಮಂಗಳವಾರ ವಿರೋಧ ಪಕ್ಷದ ನಾಯಕರಾದ ಅಶೋಕ್, ಮಾಜಿಡಿಸಿಎಂ ಅಶ್ವಥ್ ನಾರಾಯಣ್, ಸಂಸದರಾದ ಡಾ.ಸಿ.ಎನ್. ಮಂಜುನಾಥ್ ಸೇರಿದಂತೆ ಹಲವು ಬಿಜೆಪಿ ನಾಯಕರು ಆಗಮಿಸಿದ್ದರು.