ಹಳಿಯಾಳ : ಕಬ್ಬು ಕಟಾವ್ ಮಾಡುತ್ತಿರುವ ಸಂದರ್ಭದಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಪ್ರತ್ಯಕ್ಷವಾಗಿರುವ ಘಟನೆ ಅಮ್ಮನಕೊಪ್ಪ ಗ್ರಾಮದ ರೈತರೋರ್ವರ ಕಬ್ಬಿನ ತೋಟದಲ್ಲಿ ನಡೆದಿದ್ದು, ಕಬ್ಬಿನ ತೋಟದೊಳಗೆ ಹೆಬ್ಬಾವು ಪ್ರತ್ಯಕ್ಷವಾಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿದೆ. ಈ ಬಗ್ಗೆ ಎಂದು ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಕಬ್ಬು ಕಟಾವ್ ಮಾಡುತ್ತಿರುವ ಸಂದರ್ಭದಲ್ಲಿ ಹೆಬ್ಬಾವು ಕಂಡುಬಂದಿದ್ದು, ಸ್ಥಳದಲ್ಲಿ ಒಮ್ಮೆ ಆತಂಕ ನಿರ್ಮಾಣವಾಗಿತ್ತು. ನಂತರ ಉರಗ ಪ್ರೇಮಿ ಸ್ಥಳಕ್ಕಾಗಮಿಸಿ ಸುರಕ್ಷಿತವಾಗಿ ಹಾವನ್ನು ಹಿಡಿದು ಮರಳಿ ಕಾಡಿಗೆ ಬಿಟ್ಟು ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.