ದತ್ತಜಯಂತಿ ನಿಮಿತ್ತ ದತ್ತ ಭಿಕ್ಷೆ ಯಲ್ಲಾಪುರ:ದತ್ತ ಜಯಂತಿಯ ಹಿನ್ನೆಲೆಯಲ್ಲಿ ದತ್ತ ಮಂದಿರದ ಸಮಿತಿಯ ಪ್ರಮುಖರು ಸೋಮವಾರ ಪಟ್ಟಣದ ವಿವಿದೆಡೆ ದತ್ತ ಭಿಕ್ಷೆ ಕೈಗೊಂಡರು. ಪಟ್ಟಣದ ಕಾಳಮ್ಮ ನಗರ ಕೋರ್ಟವಾಡಾ, ಟಿಳಕ ಚೌಕ್, ಹಾದಿಭಾವಿ ಗಲ್ಲಿ ಮುಂತಾದೆಡೆಯಲ್ಲಿ ಮನೆ ಮನೆಗೆ ತೆರಳಿ ಅಕ್ಕಿ, ಕಾಯಿ, ಬೆಲ್ಲ, ಬೇಳೆಯಂತಹ ಸುವಸ್ತು ಹಾಗೂ ಕಾಣಿಕೆಯನ್ನು ದತ್ತ ಬಿಕ್ಷೆಯಾಗಿ ಸ್ವೀಕರಿಸಲಾಯಿತು. ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ನೇತೃತ್ವದಲ್ಲಿ ಪ್ರಮುಖರಾದ ಪ್ರಸಾದ ಹೆಗಡೆ, ನಾಗರಾಜ ಮದ್ಗುಣಿ, ಪ್ರಶಾಂತ ಹೆಗಡೆ, ರಮೇಶ ಹೆಗಡೆ, ರವಿ ದೇವಾಡಿಗ, ನಾರಾಯಣ ನಾಯಕ, ಕೆ.ಟಿ.ಭಟ್ಟ, ನಾಗಾರ್ಜುನ ಬದ್ದಿ, ಚಂದನ ನಾಯ್ಕ, ಕೇಶವ ಗಾಂವಕರ್, ಸುದೀಪ ನಾಯ್ಕ, ಪ್ರಶಾಂತ ಭಜಂತ್ರಿ, ಕಿರಣ ಭೋವಿವಡ್ಡರ, ಪ್ರಜ್ವ