ಹಾವೇರಿ: ಪ್ರೀತಿ, ಪ್ರೇಮ, ಪ್ರಣಯಗಳ ಸಂಗಮ ಬ್ಯಾಡ್ ಲಕ್ ಸಿನಿಮಾ; ನಗರದಲ್ಲಿ ನಿರ್ದೇಶಕ ಮಂಜು ಬಾರ್ಕಿ
Haveri, Haveri | Sep 17, 2025 ಪ್ರಸ್ತುತ ವಾಸ್ತವಿಕ ಬದುಕಿಗೆ ತೀರಾ ಹತ್ತಿರವನಿಸುವ ವಿಷಯಗಳನ್ನು ಬ್ಯಾಡ್ ಲಕ್ ಸಿನಿಮಾದಲ್ಲಿ ಕುತೂಹಲಭರಿತವಾಗಿ ಚಿತ್ರೀಕರಿಸಲಾಗಿದೆ. ಉತ್ತಮ ಸಂದೇಶದೊಂದಿಗೆ ಸಂಪೂರ್ಣ ಮನೋರಂಜನಾ ಚಿತ್ರ ಇದಾಗಿದ್ದು, ಪ್ರತಿಯೊಬ್ಬರಲ್ಲಿಯೂ ಮೂಡುವ ಪ್ರೀತಿ, ಪ್ರೇಮ, ಪ್ರಣಯ ಪ್ರಸಂಗಗಳು ನಡೆದಾಗ ಅನುಭವಿಸುವ ಬ್ಯಾಡ್ಲಕ್ ಸನ್ನಿವೇಶಗಳ ಹೂರಣವನ್ನು ಒಳಗೊಂಡಿದೆ ಎಂದು ಚಿತ್ರದ ನಿರ್ದೇಶಕ ಹಾಗೂ ನಾಯಕ ಮಂಜು ಬಾರ್ಕಿ ತಿಳಿಸಿದರು.ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬ್ಯಾಡ್ ಲಕ್ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬ್ಯಾಡ್ ಲಕ್ ಚಲನಚಿತ್ರದ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಮುಗಿದಿದ್ದು, ನ.ಕ್ಕೇ ಬಿಡುಗಡೆ ಆಗಲಿದೆ ಎಂದರು.