ನಂಜನಗೂಡು: ತಾಂಡವಪುರ ಗ್ರಾಮದ ಗೌರಿ ಗಣೇಶ ಮೂರ್ತಿಗಳು ಕಪಿಲ ನದಿಯಲ್ಲಿ ವಿಸರ್ಜನೆ
ತಾಲೂಕಿನ ತಾಂಡವಪುರ ಗ್ರಾಮದ ಬೀಚಾಳಮ್ಮ ದೇವಾಲಯದಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗದವರು ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಶ್ರದ್ಧ ಭಕ್ತಿಯಿಂದ ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ವಿಶೇಷ ಪೂಜೆ ಸಲ್ಲಿಸಿ ಕಪಿಲ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಗ್ರಾಮದ ವಿನಾಯಕ ಗೆಳೆಯರ ಬಳಗ ಹಾಗೂ ಗ್ರಾಮಸ್ಥರ ವತಿಯಿಂದ ಗೌರಿ ಗಣೇಶ ಮೂರ್ತಿಗಳನ್ನು ಟ್ರಾಕ್ಟರ್ ನಲ್ಲಿ ಕೂರಿಸಿ ಹೂವಿನ ಅಲಂಕಾರ ಮಾಡಿ ಡೋಲು ಕುಣಿತ ವಾದ್ಯಗೋಷ್ಠಿಯೊಡನೆ ಗ್ರಾಮದ ಪ್ರಮುಖ ರಸ್ತೆಯಲ್ಲಿ ಉತ್ಸವ ಮೆರವಣಿಗೆ ನಡೆಸಿದರು.