ಬೆಂಗಳೂರು ಉತ್ತರ: ಜೈಲಿನಲ್ಲಿ ಗಾಂಜಾ, ಪೋನ್ ಇದ್ದರೆ ಅದಕ್ಕೆ ಜೈಲು ಮುಖ್ಯಸ್ಥರೇ ಹೊಣೆ: ನಗರದಲ್ಲಿ ಪರಮೇಶ್ವರ್
ಪರಪ್ಪನ ಅಗ್ರಹಾರ ಜೈಲಿನಲ್ಲಿ ಭಯೋತ್ಪಾದಕರಿಗೆ ಮೊಬೈಲ್ ಕೈದಿಗಳಿಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪರಮೇಶ್ವರ್ ಅವರು, ರಾಜ್ಯದಲ್ಲಿ ಜೈಲುಗಳಲ್ಲಿ ಅನೇಕ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದೆ ಅಂತ ತಾವೆಲ್ಲ ವರದಿ ಮಾಡಿದ್ದೀರಾ. ಬಹಳ ಗಂಭೀರವಾಗಿ ಈ ಪ್ರಕರಣ ಪರಿಗಣಿಸಿದ್ದೇವೆ. ಸರ್ಕಾರ ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಯಾರ್ಯಾರು ಸಂಬಂಧಪಟ್ಟ ಅಧಿಕಾರಿಗಳು ಇದ್ದಾರೆ. ಯಾವ ಯಾವ ಜೈಲಿನಲ್ಲಿ ಅದರ ಹೆಡ್ ಗಳಿದ್ದಾರೆ ಅವರದ್ದೇ ಜವಾಬ್ದಾರಿ. ಜೈಲನ್ನು ಅವರ ಕೈಗೆ ಕೊಟ್ಟ ಮೇಲೆ ಅವರು ಆಡಳಿತ ಮಾಡ್ತಾ ಇರುವವರು ಅವರೇ ಜವಾಬ್ದಾರಿ.