ಕಲಬುರಗಿ: ಜಿಡಿಎ ಸಿಎ ಸೈಟ್ ದುರುಪಯೋಗ?: ನಗರದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆಗೆ ಜೆಡಿಎಸ್ ಮುಖಂಡ ಕೃಷ್ಣ ರೆಡ್ಡಿ ವಿರೋಧ
ಬಾಪುಗೌಡ ದರ್ಶನಾಪುರ ಬಡಾವಣೆಯಲ್ಲಿ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಉದ್ದೇಶಕ್ಕಾಗಿ ನೀಡಿದ ಜಿಡಿಎ ಸಿಎ ಸೈಟ್ನ್ನು ಕಾನೂನು ಬಾಹಿರವಾಗಿ ಅನ್ಯ ಕಾರ್ಯಕ್ಕೆ ಬಳಸಲಾಗಿದೆ ಎಂದು ಜೆಡಿಎಸ್ ಮುಖಂಡ ಕೃಷ್ಣ ರೆಡ್ಡಿ ಆರೋಪಿಸಿದ್ದಾರೆ. ಶೆನಿವಾರ 5 ಗಂಟೆಗೆ ಮಾತನಾಡಿದ ಅವರು, 2005ರಲ್ಲಿ ನೀಡಿದ ಸೈಟ್ ಮೇಲೆ ಜಿಡಿಎ ನಿಯಮಾನುಸಾರ ಮೂರು ವರ್ಷದಲ್ಲಿ ಕಟ್ಟಡ ನಿರ್ಮಿಸಬೇಕಿದ್ದರೂ, ಸುಮಾರು 20 ವರ್ಷಗಳ ನಂತರ ಇದೀಗ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿ ಉದ್ಘಾಟನೆ ಮಾಡಲು ಮುಂದಾಗಿದ್ದಾರೆ ಎಂದರು ಇದರ ವಿರುದ್ಧ ಕಾನೂನು ಹೋರಾಟ ಆರಂಭಿಸುವುದಾಗಿ ತಿಳಿಸಿದ ಅವರು, ಇದೊಂದು ಕಾನೂನು ಬಾಹಿರವಾಗಿದ್ದು ಉದ್ಘಾಟನೆಗೆ ಬರುವ ರಾಜಕೀಯ ಗಣ್ಯರು ಸಚಿವರು ಯೋಚನೆಮಾಡಿ ಬರಬೇಕೆಂದು ಹೇಳಿದ್ದಾರೆ.