ಚಡಚಣ: ಭೀಮಾತೀರದಲ್ಲಿ ಬ್ಯಾಂಕ್ ದರೋಡೆ ಪ್ರಕರಣ, ಪಟ್ಟಣದ ಎಸ್ ಬಿ ಐ ಬ್ಯಾಂಕ್ ಮುಂದೆ ಜಮಾವಣೆಗೊಂಡ ಜನರು
ಭೀಮಾತೀರದಲ್ಲಿ ಬ್ಯಾಂಕ್ ದರೋಡೆ ಪ್ರಕರಣ, ಚಡಚಣ ಪಟ್ಟಣದ ಎಸ್ ಬಿ ಐ ಬ್ಯಾಂಕ್ ಮುಂದೆ ಜಮಾವಣೆಗೊಂಡಿದ್ದಾರೆ. ಬ್ಯಾಂಕ್ ನಲ್ಲಿ ಠೇವಣಿ ಇಟ್ಟವರು ಹಾಗೂ ಗ್ರಾಹಕರು ಜಮಾವಣೆ ಆಗಿದ್ದಾರೆ. ನಮ್ಮ ಚಿನ್ನಾಭರಣ ಹೋಗಿದೆಯಾ ಅನ್ನೋದರ ಬಗ್ಗೆ ಮಾಹಿತಿ ಪಡೆಯಲು ಬಂದ ಗ್ರಾಹಕರು ಬರುತ್ತಿದ್ದಾರೆ. ಬ್ಯಾಂಕ್ ಲಾಕ್ ಮಾಡಿದ್ದಾರೆ ಪೊಲೀಸರು. ಬ್ಯಾಂಕ್ ಸಿಬ್ಬಂದಿಗಾಗಿ ಕಾಯುತ್ತಿದ್ದಾರೆ ಗ್ರಾಹಕರು. ಮತ್ತೊಂದು ಕಡೆ ಆರೋಪಿಗಳ ಪತ್ತೆಗೆ ಪೋಲಿಸರು ಜಾಲ ಬೀಸಿದ್ದಾರೆ