ಕೊಳ್ಳೇಗಾಲ: ದೊಡ್ಡಿಂದುವಾಡಿ ಗ್ರಾಮದ ಬಳಿ ಬೈಕ್ ಅಪಘಡ
73 ವರ್ಷದ ಸವಾರ ಸ್ಥಳದಲ್ಲೇ ದುರ್ಮರಣ
ಕೊಳ್ಳೇಗಾಲ. ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮದ ಬಳಿ ಎರಡು ಬೈಕ್ ನಡುವೆ ಅಪಘಾತ ನಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬುಧವಾರ ಸಂಜೆ ಜರುಗಿದೆ. ಚೆಲುವನಹಳ್ಳಿ ಗ್ರಾಮದ ಮಹದೇವಪ್ಪ(73) ಮೃತ್ತ ದುರ್ದೈವಿ. ಇವರು ಉದ್ದನೂರು ಗ್ರಾಮದ ಸಾವು ಕಾರ್ಯ ಮುಗಿಸಿ ವಾಪಸ್ಸು ತಮ್ಮ ಗ್ರಾಮಕ್ಕೆ ತಮ್ಮ ಟಿವಿಎಸ್ ಎಕ್ಸ್ ಎಲ್ ಬೈಕ್ ನಲ್ಲಿ ಬರುವಾಗ ಹಿಂಬದಿಯಿಂದ ಅಜಾಗರೂಕತೆಯಿಂದ ಬಂದ ಪಲ್ಸರ್ ಎನ್.ಎಸ್ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.