ಸರ್ಕಾರದ ಅನುದಾನ ದುರುಪಯೋಗ ಪಡಿಸಿಕೊಂಡಿದ್ದಾರೆಂದು ಯಳಂದೂರು ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ಪ್ರಭಾರ ಮೇಲ್ವಿಚಾರಕಿ ನೇತ್ರಾವತಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ಎಂ.ಗುರುಸ್ವಾಮಿ ಜಿಪಂ ಸಿಇಓ ಮೋನಾರೋತ್ ಅವರಿಗೆ ದೂರು ಕೊಟ್ಟರು. ಮಂಗಳವಾರ ನಗರದಲ್ಲಿ ಜಿಪಂ ಸಿಇಒ ಅವರನ್ನು ಭೇಟಿಯಾಗಿ, 2022 ರಿಂದ 2024ನೇ ಇಸವಿಯವರೆಗೆ ಸದರಿ ನಿಲಯದ ಮೇಲ್ವಿಚಾರಕರ ಹುದ್ದೆಯ ಪ್ರಭಾರ ನೀಡಿದ್ದ ಅವಧಿಯಲ್ಲಿ ಏಜೆನ್ಸಿಯ ಬಿಲ್ ಪುಸ್ತಕವನ್ನು ತಮ್ಮ ಬಳಿಯಲ್ಲಿಯೇ ಇಟ್ಟುಕೊಂಡು ತಮ್ಮ ಸ್ವ-ಹಸ್ತಕ್ಷರದಲ್ಲಿ ಆಕ್ರಮವಾಗಿ ನೂರಾರು ಬಿಲ್ಗಳನ್ನು ಬರೆದುಕೊಂಡು ಸರ್ಕಾರದ ಅನುದಾನದ ಹಣವನ್ನು, ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರಿದರು.