ಮಳವಳ್ಳಿ: ತಾಲ್ಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ನಡೆದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಮಳವಳ್ಳಿ : ತಾಲ್ಲೂಕಿನ ಚೊಟ್ಟನ ಹಳ್ಳಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಬುಧವಾರ ಏರ್ಪಾಡಾ ಗಿತ್ತು.. ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಸಂಘದ ಆವರಣದಲ್ಲಿ ಏರ್ಪಾಡಾ ಗಿದ್ದ ಸಭೆಯಲ್ಲಿ ವಾರ್ಷಿಕ ವರದಿ ಮಂಡಿಸಿದ ಸಂಘದ ಮುಖ್ಯ ಕಾರ್ಯನಿರ್ವಾಹಕ ಶಿವಮಾದೇ ಗೌಡ ಅವರು ವಾರ್ಷಿಕ ವರದಿ ಮಂಡಿಸಿ 2024-25 ಸಾಲಿನಲ್ಲಿ ಸಂಘವು 3ಲಕ್ಷದ 30 ಸಾವಿರ ರೂ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು. ಸಂಘದ ಅಧ್ಯಕ್ಷರು ಮಂಡ್ಯ ಜಿಲ್ಲಾ ಸಹಕಾರ ಕೃಷಿ ಉತ್ಪನ್ನಗಳ ಮಾರಾಟ ಒಕ್ಕೂಟದ ನಿರ್ಧೇಶಕರೂ ಆದ ಎಂ ಬಸವ ರಾಜು ಅವರು ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.