ಯಲ್ಲಾಪುರ :ಪಟ್ಟಣದ ಮಹಿಳಾ ಮಂಡಲ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕೇಂದ್ರದ ಕಾರ್ಯಕ್ರಮದಡಿಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕ್ಷತಾ ಆಚಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆ.ಜಿ.ಎಸ್ ಶಾಲೆಯ ಶಿಕ್ಷಕಿ ಸುಮಂಗಲ ವೆರ್ಣೇಕರ್, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ನಿರ್ಮಲ, ವಲಯದ ಮೇಲ್ವಿಚಾರಕ ಮಹಾಂತಯ್ಯ, ಹಾಗೂ ಎಂ ಎಂ ಜೋಶಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿಗಳಾದ ಅನಿತಾ ದೇಸಾಯಿ ಸ್ವಾಗತಿಸಿದರು.