ಬೆಳಗಾವಿಯಲ್ಲಿ ಭುಗಿಲೆದ್ದ ಪ್ರತ್ಯೇಕ ಜಿಲ್ಲಾ ಹೋರಾಟದ ಕಿಚ್ಚು ಬೈಲಹೊಂಗಲ ಪಟ್ಟಣದ ಸಂಪೂರ್ಣ ಬಂದ ಮಾಡಿದ್ದು ಈ ವೇಳೆ ಶಾಸಕ ಬಾಬಾಸಾಹೇಬ್ ಪಾಟೀಲ ಇಂದು ಶನಿವಾರ 2 ಗಂಟೆಗೆ ಮಾಧ್ಯಮಗಳ ಜೊತೆ ಮಾತಮಾಡಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಬೈಲಹೊಂಗಲ ಸಂಪೂರ್ಣ ಬಂದ್ ಮಾಡಿದ್ದೇವೆ ಆದರೆ ಬೈಲಹೊಂಗಲ ಪ್ರತ್ಯೇಕ ಜಿಲ್ಲೆ ಆಗಲೇಬೇಕು ಬಹುದಿನಗಳ ಕನಸಾಗಿದ್ದು ಆದ್ದರಿಂದ ಅಭಿವೃದ್ಧಿ ದೃಷ್ಟಿಯಿಂದ ಆದರೂ ಬೈಲಹೊಂಗಲ ಜಿಲ್ಲೆ ಆಗಲೇಬೇಕು ಈಗಾಗಲೇ ನಮ್ಮ ಸರ್ಕಾರದ ಗಮನಕ್ಕೆ ಇಟ್ಟಿದ್ದೇವೆ ಇನ್ನೊಂದು ಬಾರಿ ನಮ್ಮ ನಿಯೋಗ ಸಿಎಂ ಅವರನ್ನ ಭೇಟಿ ಮಾಡಿ ಮನವಿ ಮಾಡುತ್ತೇವೆ ಜಿಲ್ಲಾ ವಿಭಜನೆ ಮಾಡಿದರೆ ಬೈಲಹೊಂಗಲ ಜಿಲ್ಲಾ ಮಾಡಲೇಬೆಕು ವಿಭಜನೆ ಮಾಡದೇ ಹೋದರೆ ಬೆಳಗಾವಿ ಜಿಲ್ಲೆ ಅಖಂಡವಾಗಿರಬೇಕು ಎಂದರು.