ಕಲಬುರಗಿ: ನಗರದಲ್ಲಿ ರೈತ ಸಂಘಟನೆಗಳಿಂದ ದುಂಡು ಮೇಜಿನ ಸಭೆ
ಕಲಬುರಗಿ ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಠಿ, ನೆರೆಹಾವಳಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಮುಂದಿನ ಹೋರಾಟದ ಕುರಿತು ವಿವಿಧ ರೈತ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ನಗರದ ಕನ್ನಡ ಭವನದಲ್ಲಿ ದುಂಡು ಮೇಜಿನ ಸಭೆ ನಡೆಸಲಾಯಿತು.ಕಬ್ಬು ಬೆಳೆಗಾರರಿಗೆ ಎಫ್ಆರ್ ಪಿ ಪ್ರಕಾರ ಬೆಲೆ ನಿಗದಿಪಡಿಸಬೇಕು, ಸರ್ಕಾರದ ಮಾರ್ಗ ಸೂಚಿಗಳು ಪಾಲನೆ ಮಾಡದೆ ಉಲ್ಲಂಘನೆ ಮಾಡಿ ದರ್ಪ ತೋರುವ ಸಕ್ಕೆರೆ ಕಾರ್ಖಾನೆಗಳ ವಿರುದ್ದ ಕ್ರಿಮಿನಲ್ ಮೋಕದ್ದಮೆ ದಾಖಲು ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಲು ನಿರ್ಧರಿಸಲಾಯಿತು.ನ.4 ರಂದು ನಡೆದ ಸಭೆ