ಹುಬ್ಬಳ್ಳಿ ನಗರ: ಬಹುನಿರೀಕ್ಷಿತ ಹುಬ್ಬಳ್ಳಿಯ ಮಲ್ಟಿ- ಲೇವಲ್ ಕಾರ್ ಪಾರ್ಕಿಂಗ್ ಗೆ ಗ್ರಹಣ: ಗುತ್ತಿಗೆ ರದ್ದತಿಗೆ ಮಹಾನಗರ ಪಾಲಿಕೆ ಚಿಂತನೆ
ಹುಬ್ಬಳ್ಳಿ: ನಗರದ ಹಳೇ ಕೊರ್ಟ್ ವೃತ್ತದ ಬಳಿಯ ಸಾಯಿ ಮಂದಿರದ ಎದುರು ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಮಲ್ಟಿ- ಲೇವಲ್ ಕಾರ್ ಪಾರ್ಕಿಂಗ್ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಕಾಮಗಾರಿ ಆರಂಭವಾಗಿ ದಶಕಗಳು ಕಳೆದರೂ ಕೂಡ ನೆಲಮಟ್ಟ ಬಿಟ್ಟು ಮೇಲೆ ಏಳುತ್ತಿಲ್ಲ. ಇದು ಮಹಾನಗರ ಪಾಲಿಕೆಗೆ ತೀವ್ರ ತಲೆನೋವು ತಂದೊಡ್ಡಿದ್ದು, ಗುತ್ತಿಗೆಯನ್ನು ರದ್ದು ಮಾಡಲು ಮಹಾನಗರ ಪಾಲಿಕೆ ಚಿಂತನೆ ನಡೆಸಿದೆ. ಅವಳಿನಗರದ ವಾಹನಗಳ ದಟ್ಟಣೆ ಗಮನದಲ್ಲಿಟ್ಟುಕೊಂಡು ಸುಸಜ್ಜಿತವಾದ ವಾಹನ ನಿಲುಗಡೆಗೆ ಆನುಕೂಲವಾಗುವ ನಿಟ್ಟಿನಲ್ಲಿ ಈ ಮಲ್ಟಿ - ಲೆವಲ್ ಕಾರು ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿ ಯೋಜನೆ ರೂಪಿಸಿತ್ತು. ಆದರೆ, ದಶಕಗಳು ಕಳೆದರೂ ಈ ಯೋಜನೆ ಸಫಲವಾಗಿಲ್ಲ. ಹೀಗಾಗಿ ಸ್ಮಾರ್ಟ್ ಸಿಟಿ ಅಧಿಕಾ