ಗುಂಡ್ಲುಪೇಟೆ: ರೈತರಿಗೆ ಶುಭಸುದ್ದಿ... ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ನೀರು ತುಂಬಲು ಚಾಲನೆ
ಗುಂಡ್ಲುಪೇಟೆ ತಾಲ್ಲೂಕಿನ ಹುತ್ತೂರು ಕೆರೆಯಲ್ಲಿ ಮೋಟಾರ್ ಆನ್ ಮಾಡುವ ಮೂಲಕ ವಡ್ಡಗೆರೆ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಶಾಸಕ ಹೆಚ್.ಎಂ.ಗಣೇಶ್ ಪ್ರಸಾದ್ ಶುಕ್ರವಾರ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಶಾಸಕರು ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ನಾನು , ರೈತರಿಗೆ ಕೊಟ್ಟ ಭರವಸೆಯಂತೆ ವಡ್ಡಗೆರೆ ಕೆರೆಗೆ ನೀರು ತುಂಬಿಸುವುದಕ್ಕೆ ಚಾಲನೆ ನೀಡಿದ್ದೇನೆ. ಕೆಲವು ತಾಂತ್ರಿಕ ದೋಷದ ಕಾರಣ ಕೆರೆಗೆ ನೀರು ತುಂಬಿಸುವ ಕಾರ್ಯ ವಿಳಂಬವಾಯಿತೆ ಹೊರತು ಬೇರೆ ಯಾವ ಕಾರಣ ಇಲ್ಲ ಎಂದು ತಿಳಿಸಿದರು. ಕಳೆದ ಒಂದು ತಿಂಗಳುಗಳಿಂದ ರಿಪೇರಿಯಾಗಿರುವ ಮೋಟಾರ್ ತ್ವರಿತಗತಿಯಲ್ಲಿ ರಿಪೇರಿ ಮಾಡಿಸಿ ಇಂದು ಚಾಲನೆ ಕೊಡಲಾಗಿದೆ ಎಂದರು.