ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಂಗಳೂರು ಗೋವಿಂದರಾಜನಗರ ಪೊಲೀಸರ ಕಾರ್ಯಾಚರಣೆ ಹಿನ್ನೆಲೆ, 18 ಲಕ್ಷಮೌಲ್ಯದ 120 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ಬೈಕ್ ನಲ್ಲಿ ಬಂದು ಮೊಬೈಲ್ ಕಿತ್ತುಕೊಂಡು ಪರಾರಿಯಾಗ್ತಿದ್ದ ಆರೋಪಿಗಳ ಬೆನ್ನು ಹತ್ತಿದ್ದ ಪೊಲೀಸರು, ಸ್ನ್ಯಾಚ್ ಮಾಡಿ ಮೊಬೈಲನ್ನ ಮಾರಾಟ ಮಾಡ್ತಿದ್ದ ಆರೋಪಿಗಳನ್ನ ಬಂಧಿಸಿದ್ದಾರೆ. ಪರ್ವೇಜ್, ಜುಬೇರುದ್ದೀನ್, ಸದ್ದಾಂ, ಅಮ್ಜದ್ ಪಾಷಾ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳ ಪೈಕಿ ಪರ್ವೇಜ್ ಹಾಗೂ ಜುಬೇರುದ್ದೀನ್ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.