ನಗರದಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಮಂಗಳವಾರ ಸಂಜೆ 6ಕ್ಕೆ ಮಾಹಿತಿ ನೀಡಿದ್ದು ಪ್ರಸಕ್ತ ಸಾಲಿನಲ್ಲಿ ಬೆಂಬಲಬೆಲೆ ಯೋಜನೆಯಡಿಯಲ್ಲಿ ರೈತರಿಂದ ಮೆಕ್ಕೆಜೋಳವನ್ನು ಖರೀಧಿಸುವ ಬಗ್ಗೆ ಸರ್ಕಾರದ ಆದೇಶದಂತೆ ಖರೀದಿ ಕೇಂದ್ರಗಳನ್ನು ಧಾರವಾಡದ ಲಕಮ್ಮನಳ್ಳಿ ಮತ್ತು ಪಶು ಆಹಾರ ಕಾರ್ಖಾನೆ ಧಾರವಾಡದಲ್ಲಿ ತೆರದು ರೈತರ ನೋಂದಣಿ ಮತ್ತು ಖರೀದಿಗೆ ಕ್ರಮವಹಿಸಲಾಗಿರುತ್ತದೆ. ಪ್ರತಿ ಕ್ವಿಂಟಲ್ಗೆ ರೂ. 2400 ಸರ್ಕಾರದಿಂದ ನಿಗದಿಪಡಿಸಿದ ಬೆಲೆ ನೀಡಿ ಖರೀದಿಸಲಾಗುತ್ತದೆ. ರೈತರು, ಇ-ಸಂಮೃದ್ಧಿ ಮತ್ತು ಸರ್ಕಾರದ ಫ್ರುಟ್ಸ್ ತಂತ್ರಾಂಶದ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.