ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಮಾತುಕತೆ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಡಿಕೆ ಶಿವಕುಮಾರ್ ಭೇಟಿಯಾಗಿದ್ವಿ. ಮದುವೆಗೆ ಅವರು ಬಂದಿದ್ದರು ನಾವು ಮದುವೆಗೆ ಹೋಗಿದ್ವಿ. ಈ ವೇಳೆ ಭೇಟಿಯಾಗಿದೆ. ಅವರು ಕೂಡ ನಮ್ಮ ಜೊತೆ ಊಟಕ್ಕೆ ಜೊತೆಯಲ್ಲಿದ್ರು. ಆನಂತರ ಅವರು ಬೇರೆ ಕಾರ್ಯಕ್ರಮಕ್ಕೆ ಹೋದರು ನಾವು ನಮ್ಮ ಮನೆಗೆ ಬಂದ್ವಿ. ಪ್ರತ್ಯೇಕವಾಗಿ 15 ನಿಮಿಷ ಯಾಕೆ ಜಾಸ್ತಿನೇ ಮಾತನಾಡಿರಬಹುದು. ನಾವು ಬರೋದು ಅವರಿಗೆ ಗೊತ್ತಿಲ್ಲ. ಅವರು ಬರೋದು ನನಗೆ ಗೊತ್ತಿಲ್ಲ. ಮದುವೆಯ ಸಂದರ್ಭದಲ್ಲಿ ಭೇಟಿಯಾಗಿದ್ವಿ ಅಷ್ಟೇ ಎಂದರು.