ಗುಂಡ್ಲುಪೇಟೆ: ಬೆಳವಾಡಿಯಲ್ಲಿ ಬಸವ ಭವನ ನಿರ್ಮಾಣ ಜಟಾಪಟಿ; 16 ಮಂದಿ ವಿರುದ್ಧ ಪ್ರತಿದೂರು ದಾಖಲು
ನಮ್ಮ ಮೇಲೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿ ನಗದು, ಚಿನ್ನಾಭರಣ ಕಸಿದುಕೊಂಡಿದ್ದಾರೆ ಎಂದು ಪರಿಶಿಷ್ಟ ಸಮುದಾಯದ ಹದಿನಾರು ಮಂದಿ ವಿರುದ್ದ ತಾಲೂಕಿನ ಬೆಳವಾಡಿ ಗ್ರಾಮದ ಸವರ್ಣೀಯರು ದೂರು ಸಲ್ಲಿಸಿದ್ದಾರೆ. ಗ್ರಾಮದ ಟ್ರ್ಯಾಕ್ಟರ್ ಮೂರ್ತಿ, ಕುನ್ನಿಂಗಯ್ಯ, ನಟರಾಜು, ರವಿ, ಕರಿಯಯ್ಯ, ಸಿದ್ದರಾಜು, ಮಹದೇವಯ್ಯ, ದೇಶಯ್ಯ, ಚಿನ್ನಸ್ವಾಮಿ ಸೇರಿ 16 ಮಂದಿ ಆರೋಪಿತರು. ಬಸವ ಭವನ ನಿರ್ಮಾಣ ಮಾಡುತ್ತಿದ್ದೀರಿ ಎಂದು ಏಕಾಏಕಿ ನಮ್ಮಗಳ ಮನೆ ಮೇಲೆ ಕಲ್ಲನ್ನು ಎಸೆದು ಬಾಯಿಗೆ ಬಂದಂತೆ ಬೈದು ನಮ್ಮಗಳ ಮೇಲೆ ಹಲ್ಲೆ ಮಾಡಿ ನಮ್ಮಗಳ ವಾಚ್, 10 ಸಾವಿರ ನಗದು, ಚಿನ್ನದ ಸರ ಕಸಿದುಕೊಂಡಿದ್ದಾರೆ ಎಂದು ನಂಜಪ್ಪ ಎಂಬುವರು ದೂರು ನೀಡಿದ್ದು, ದೂರಿನನ್ವಯ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.