ಕೊಳ್ಳೇಗಾಲ ಪಟ್ಟಣದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸುದ್ದಿಗಾರರೊಂದಿಗೆ ಮಾತನಾಡಿ ಜೀವ ಅತ್ಯಮೂಲ್ಯವಾದದ್ದು, ಈ ಜೀವ ಹೋದರೆ ಮತ್ತೆ ಬರುದಿಲ್ಲ. ಪ್ರತಿಯೊಂದು ಜೀವಕ್ಕೂ ಅಷ್ಟೇ ಮಹತ್ವ ಕೊಡಬೇಕಾಗುತ್ತದೆ. ಮಾನವ ಜೀವನವು ಸಂರಕ್ಷಣೆ ಆಗುಬೇಕು ಹಾಗೇ ಪ್ರಕೃತಿ ಪ್ರಾಣಿಗಳ ಜೀವ ಸಂರಕ್ಷಣೆ ಮಾಡಲು ನಮ್ಮೆಲ್ಲರ ಕರ್ತವ್ಯವಾಗಿದೆ. ಆದ್ದರಿಂದ ಅರಣ್ಯ ಇಲಾಖೆ ಸರ್ಕಾರದ ಜೊತೆ ಜನರು ಕೂಡ ಕೈಜೋಡಿಸಬೇಕು, ಯಾವಾಗ ಹುಲಿ, ಆನೆ, ಚಿರತೆ ಕಾಣಿಸಿಕೊಳ್ಳುತ್ತದೆ ಅವಾಗ ಅರಣ್ಯ ಇಲಾಖೆ ದೂರವಾಣಿ ಸಂಖ್ಯೆ 1926 ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡಿ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗಳು ಅಧಿಕಾರಿಗಳು ಸ್ಪಂದಿಸುವ ಕೆಲಸ ಮಾಡುತ್ತಾರೆ ಎಂದರು