ಮಳವಳ್ಳಿ : ಪಟ್ಟಣದಲ್ಲಿ ಸರ್ವ ಸಮುದಾಯಗಳ ಸಭೆ ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಶುಕ್ರವಾರ ಸಾಯುವ 5.30 ರಲ್ಲಿ ಜರುಗಿತು. ಪಟ್ಟಣದಲ್ಲಿನ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿರವರ ಜಯಂತಿ ಕಾರ್ಯಾ ಲಯದಲ್ಲಿ ನಡೆದ ಸಭೆಯಲ್ಲಿ ಜಯಂತಿ ಮಹೋತ್ಸವದ ಸಂಚಲಕರಾದ ಪಿ.ಎಂ. ಮಹದೇವ ಸ್ವಾಮಿ ಮಾತನಾಡಿ ಪಟ್ಟಣ ಶಾಂತಿ ಕಾಲೇಜು ಮುಂಭಾದಲ್ಲಿ ಡಿ.16 ರಿಂದ ಡಿ. 22 ರವರೆಗೆ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿ ರವರ 1066ನೇ ಜಯಂತಿ ಮಹೋತ್ಸವ ಜರುಗಲಿದೆ. ಪರಮ ಪೂಜ್ಯ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಡಿ 16ರಂದು ಸುತ್ತೂರಿನಿಂದ ಉತ್ಸವ ಮೂರ್ತಿ ಆಗಮಿಸಲಿದೆ ಎಂದು ತಿಳಿಸಿದರು.