ಗುಂಡ್ಲುಪೇಟೆ: ಕೆರೆಯ ನೀರಿಗಾಗಿ ಕೇಸರಿ ಮಯವಾದ ಗುಂಡ್ಲುಪೇಟೆ.
ರಸ್ತೆರಸ್ತೆಗಳಲ್ಲಿ ಬೀದಿ ಬೀದಿಗಳಲ್ಲಿ ಬಿಜೆಪಿಯ ಬಾವುಟ
ಕೆರೆಯ ನೀರಿಗಾಗಿ ಕೇಸರಿ ಮಯವಾದ ಗುಂಡ್ಲುಪೇಟೆ. ರಸ್ತೆರಸ್ತೆಗಳಲ್ಲಿ ಬೀದಿ ಬೀದಿಗಳಲ್ಲಿ ಬಿಜೆಪಿಯ ಕೇಸರಿ ಬಾವುಟ ರಾರಾಜಿಸಿ ಎಲ್ಲರ ಗಮನ ಸೆಳೆಯಿತು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೆರೆಗಳಿಗೆ ನೀರು ತುಂಬಿಸುವ ಯೋಜೆನೆಗೆ 212 ಕೋಟಿ ಅನುದಾನ ನೀಡಿ ಚಾಮರಾಜನಗರ ಜಿಲ್ಲೆಯ 22 ಕೆರೆಗಳಿಗೆ ನೀರು ತುಂಬಿಸಿದ್ರು. ಆದರೆ ಬಿಜೆಪಿ ಸರ್ಕಾರ ಕಳೆದ ನಂತರ ಅಧಿಕಾರಿಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ ಸರ್ಕಾರವು ಗ್ಯಾರಂಟಿ ನೆಪ ಹೇಳಿ ಕೆರೆಗಳಿಗೆ ನೀರು ತುಂಬಿಸುತ್ತಿಲ್ಲವೆಂದು ಆರೋಪಿಸಿ ಇಂದು ಗುಂಡ್ಲುಪೇಟೆಯಲ್ಲಿ ಕೇಸರಿ ಬಾವುಟ ರಾರಾಜಿಸಿ ಬೀದಿ ಗಿಳಿದು ಹೋರಾಟ ನಡೆಸಿದರು.